ಕೊಕ್ರಾಡಿ, ಆಗಸ್ಟ್ 10, 2024 : ಕಾಲೇಜಿನ ವಿದ್ಯಾರ್ಥಿಗಳು ಏರ್ಪಡಿಸಿದ ಈ ಕಾರ್ಯಕ್ರಮವು ಶ್ರೀ ನೋರ್ಬರ್ಟ್ ಮಾರ್ಟೀಸ್, ಪ್ರಾಂಶುಪಾಲರು ಸರಕಾರಿ ಪದವಿಪೂರ್ವ ಕಾಲೇಜು ಕೊಕ್ರಾಡಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಶ್ರೀ ಮೋಹನ್ ಅಂಡಿಂಜೆ, ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯತ್ ಅಂಡಿಂಜೆ, ಶ್ರೀ ಸೂರ್ಯನಾರಾಯಣ. ಡಿ. ಕೆ, ಮಾಜಿ ಕಾರ್ಯಧ್ಯಕ್ಷರು ಸರಕಾರಿ ಪದವಿಪೂರ್ವ ಕಾಲೇಜು ಕೊಕ್ರಾಡಿ, ಶ್ರೀ ವೆಂಕಟೇಶ್, ಉಪನ್ಯಾಸಕರು ಸರಕಾರಿ ಪದವಿಪೂರ್ವ ಕಾಲೇಜು, ವೇಣೂರು ಹಾಗೂ ಕಾಲೇಜಿನ ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು

ವಿದ್ಯಾರ್ಥಿಗಳು ಆಷಾಡ( ಆಟಿ) ತಿಂಗಳಿನಲ್ಲಿ ಮಾಡುವ ವಿವಿಧ ರೀತಿಯ ತಿಂಡಿ ತಿನಸುಗಳನ್ನು ತಯಾರಿಸಿ ಈ ಕಾರ್ಯಕ್ರಮಕ್ಕೆ ತಂದಿದ್ದರು. ವಿವಿಧ ರೀತಿಯ ಔಷಧೀಯ ಗುಣಗಳುಳ ಗಿಡಮೂಲಿಕೆಯ ಸಸಿ, ಬಲ್ಲಿ, ಚೆಕ್ಕೆ ಇತ್ಯಾದಿಗಳನ್ನು ತಂದಿದ್ದರು ಹಾಗೂ ನಮ್ಮ ಹಿರಿಯರು ಉಪಯೋಗಿಸುತ್ತಿದ ಕೃಷಿ ಸಲಕರಣೆಗಳನ್ನು ತಂದಿದ್ದರು.

ಕಾಲೇಜಿನ ಪ್ರಾಂಶುಪಾಲರು,ಉಪನ್ಯಾಸಕರು, ಮುಖ್ಯ ಅತಿಥಿಗಳು ಹಾಗೂ ವಿದ್ಯಾರ್ಥಿಗಳೆಲ್ಲರು ಸಂಪ್ರದಾಯಿಕ ಉಡುಗೆಗಳನ್ನು ತೊಟ್ಟಿದರು.
ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಮುಖ್ಯ ಅತಿಥಿಗಳು ಆಷಾಡದ ಮಹತ್ವ ಹಾಗೂ ಅದರ ವಿಶೇಷತೆಗಳ ಬಗ್ಗೆ ಒಂದೆರಡು ಹಿತನುಡಿಗಳನ್ನು ಆಡಿದರು. ಕಾರ್ಯಕ್ರಮದ ಕೊನೆಯಲ್ಲಿ ಸೇರಿದ ಅತಿಥಿಗಳಿಗೆ ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಮೆಂತೆ ಗಂಜಿ ಊಟ ನೀಡುವ ಮೂಲಕ ಕಾರ್ಯಕ್ರಮಕ್ಕೆ ತೆರೆಎಳೆದರು.

Leave a Reply

Your email address will not be published. Required fields are marked *

You May Also Like

ಎಲ್.ಸಿ.ಆರ್ ಇಂಡಿಯನ್ ಪದವಿ ಕಾಲೇಜು ಕಕ್ಯಪದವು 100% ಫಲಿತಾಂಶ

ಕಕ್ಯಪದವು : ಎಲ್.ಸಿ.ಆರ್ ವಿದ್ಯಾಸಂಸ್ಥೆಯ 2023-24 ನೇ ಶೈಕ್ಷಣಿಕ ಸಾಲಿನ ( NEP ) ಮಂಗಳೂರು…

Local Talent Shines Bright: Trisha from Belthangady Selected for DKD Reality Show

Ms. Trisha, talented daughter of Mr. Prashant and Mrs. Shailaja, Guruvayanakere, has…

St. Joseph’s P U College, Bajpe Hosts Students’ Council Inauguration and Investiture Program

Bajpe, 23 June 2025: St. Joseph’s P U College, Bajpe held the…

ಗಾಯನ ಸ್ಪರ್ಧೆಯಲ್ಲಿ ಎಲ್ ಸಿ ಆರ್ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ 

ಇರ್ವತ್ತೂರು, ಆಗಸ್ಟ್ 16, 2024 : ಇರ್ವತ್ತೂರು ಗ್ರಾಮ ಪಂಚಾಯತ್ ನಲ್ಲಿ ಭಾರತ್ ಸ್ಕೌಟ್ಸ್ ಮತ್ತು…